Showing posts with label ರಾಮನಾಮ. Show all posts
Showing posts with label ರಾಮನಾಮ. Show all posts

Thursday, April 10, 2025

ರಾಮನಾಮ ಆನಂದಧಾಮ

 

ರಾಮನಾಮ ಆನಂದಧಾಮ

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಸದಾ ಬರುವ ನಾಮವೇ ಎನಗೆ ಆನಂದಧಾಮ

 

ಎನ್ನ ಕಾಯವಿಹುದು ರಾಮ ನಿನ್ನ ಅಯೋಧ್ಯೆಧಾಮ

ಎನ್ನ ನರನಾಡಿಗಳಲಿ ಹರಿಯುತಿರಲಿ ನಿನ್ನದೇ ನಾಮ

 

ಎನ್ನ ದೇಹದಂಗಗಳೇ ಋಷಿಮುನಿಗಳ ಗ್ರಾಮ

ಭಿನ್ನ ಆಗದಂತೆ ಹರಸಿ ಜತನ ಮಾಡು ರಾಮ

 

ಎನ್ನ ನಾಲಿಗೆಯಿರುವುದೇ ನಿನ್ನ ನಾಮ ನುಡಿವುದಕೆ

ಎನ್ನ ಮನವಿರುವುದೇ ರಾಮ ನಿತ್ಯ ನಿನ್ನ ನೆನೆವುದಕೆ

 

ರಾಮ ನಿನ್ನ ನುಡಿಯಲಿ ಅದೇನೋ ಉಲ್ಲಾಸ

ರಾಮನಾಮ ನುಡಿದರೆನಗೆ ನಿನ್ನದೇ ಸಹವಾಸ

 

ಬರೆಯುತಿರುವೆ ಶ್ರದ್ಧೆಯಿಂದ ನಿನ್ನ ಸಹಸ್ರನಾಮ

ಬರೆದು ನಾಮ ಕಾಯುತಿರುವೆ ಬಾರೋ ಶ್ರೀರಾಮ

 

ಸದಾ ಎನ್ನ ಹೃದಯದಲಿ ನೀನೇ ಬಂದು ನೆಲಸು

ಸದಾ ಎನ್ನ ಕಾಯಕದಲಿ ನೀ ಸತ್ವ ನಿಷ್ಠೆ ಉಳಿಸು

 

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ

ಸದಾ ಬರುವ ನಾಮವೇ ನನಗೆ ಆನಂದಧಾಮ

ನೀತಿ ಪಂಚಕಂ

  ನೀತಿ ಪಂಚಕಂ ಕರ್ತೃ: ಡಾ. ಪ್ರಭಾಕರ್ ಬೆಳವಾಡಿ ಬ್ರಹ್ಮ ಮುರಾರಿ ಸುವರ್ಜಿತ ಮೋಹಂ ಕಶ್ಮಲ ದೂಷಿತ ವಿಸರ್ಜಿತ ಮೋಹಂ ಜನುಮಕೆ ಕಂಟಕ ಕಾರಕ ಮೋಹಂ ತತ್ ಕಾರಣ ತೊರೆ...