ನೀತಿ ಪಂಚಕಂ 
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ 
ಬ್ರಹ್ಮ ಮುರಾರಿ ಸುವರ್ಜಿತ ಮೋಹಂ 
ಕಶ್ಮಲ ದೂಷಿತ ವಿಸರ್ಜಿತ ಮೋಹಂ 
ಜನುಮಕೆ ಕಂಟಕ ಕಾರಕ ಮೋಹಂ 
ತತ್ ಕಾರಣ ತೊರೆಯಿರಿ ಮೋಹಂ 
ಅಧಿಕ ಆಸ್ತಿಯ ಗಳಿಸಲು ದಾಹಂ 
ಅಧಿಕಾರದ ಮದ ಏರಿಪ ದಾಹಂ 
ಅಧಿನಾಯಕನ ಜರಿಯುವ ದಾಹಂ 
ಸರ್ವನಾಶದೆಡೆ ಮುನ್ನುಡಿ ದಾಹಂ 
ಸುಂದರ ವದನ ಪಡೆಯುವ ಮೋಹಂ 
ಅಂದ ಭಕ್ತಿಯನು ತೋರಿಪೆ ದ್ರೋಹಂ 
ಚಂದದ ತರುಣಿಯ ಭೋಗಿಪ ಮೋಹಂ 
ಜನುಮದ ವಿನಾಶಕೆ ಕಾರಣ ಖಚಿತಂ 
ರಾವಣ ವಿನಾಶಕೆ ಕಾರಣ ದಾಹಂ 
ಕಂಸ ವರ್ಧನಕೆ ಸಕಾರಣ ದರ್ಪಂ 
ಶಿವ ಮುನಿಯಲು ಮೂಲವು ಕಾಮಂ
ಮೋಹಂ ದಾಹಂ ಸುನಿಶ್ಚಿತ ದುಃಖಂ 
ಸತ್ಸಂಗ ಸದ್ಭಕ್ತಿಗೆ ಒಲಿಯುವ ದೇವಂ 
ಸತ್ಭಾವನೆ ಸದ್ಬುದ್ಧಿಗೆ ನಲಿಯುವ ದೇವಂ 
ಸತ್ಕರ್ಮ ಸಚ್ಚರಿತ್ರೆಗೆ ಗೆಲಿಸುವ ದೇವಂ 
ತತ್ಪ್ರಣಮಾಮಿ ಆ ಶಿವ ಮಹಾದೇವಂ 
ಪ್ರಭಾಕರ ಶರ್ಮ ವಿರಚಿತ ಪಂಚಕಮಿದಂ ಭಜಂ 
ಶಿವಲೋಕಮವಾಪ್ನೋತಿ ಶಿವೇನ ಸಹ ಸನ್ನಿಧಿಂ 
No comments:
Post a Comment