ಗಂಗೆ ಬಾ ತಾಯೆ ಹರಿದು ಬಾ 
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ
ಹರಸು ಬಾ ತಾಯೆ ನಲಿದೊಲಿದು ಬಾ 
ಹರ ಹರಸಿದ ಗಂಗೆ ಉತ್ತುಂಗೆ ಕುಣಿ ಕುಣಿದು ಬಾ 
ಹರನ ಜಟೆಯಿಂದ ಕಟಕಟೆಯಿಂದ ಪುಟಿ ಪುಟಿದು ಬಾ 
ಹರವು ಹರವಾಗುತ್ತಾ ಹರಿವೇಗದಲಿ ಹರಿದ್ವಾರಕೆ ಬಾ 
ಹರನ ನಮೋ ಗಂಗೆ ನಮಾಮಿ ಗಂಗೆ ಇಳಿದು
ಬಾ 
ಹರನಿತ್ತ ಶಿರತೂಗಿ ಪರವಾಗಿ ಮಿಂದವರ ವರವಾಗಿ ಬಾ 
ಗವಿಯ ಕೊರೆದು ಭವವ ಹಿರಿದು ಬಾ 
ಸುವಿಹಾರಿಯಾಗಿ ಸುಶುದ್ಧಿತಳಾಗಿ
ಬಾ ತಾಯೇ ಬಾ 
ರವಿ ಕಿರಣ ನಲಿದು ಧರೆಗಿಳಿದು ಬಿದ್ದಂತೆ
ಬಾ 
ಸವಿಯ ಉಣಿಸುತ ಭುವಿಯ ತಣಿಸುತ ಬಾ 
ಮೇವಿಲ್ಲದ ಗೋವುಗಳಿಗೆ ತರುಲತೆಗಳಿಗೆ ಉಣಿಸು ಬಾ 
ಭುವಿಯ ಭಕ್ತರಿಗೆ ಪಾಪವಳಿಸಿ ಪುಣ್ಯವೆಸಗು ಬಾ 
ಕಿರಿದಾದ ಕಣಿವೆಯಲಿ ಬರಿದಾದ ಕೊಳ್ಳದಲಿ ಹಿರಿಯುತ್ತ
ಬಾ 
ಹರಿಯುತ್ತ ಬರಒತ್ತಿ ಝರಿಯಾಗಿ ಸರಿಯುತಲಿ ಜಿಗಿ ಜಿಗಿದು ಬಾ 
ಮರಿ ಸಸಿಗಳಿಗೆ ಗೋಮಾಳಕೆ ನೀರೆರೆಯುತಲಿ ಕಾಪಾಡು ಬಾ 
ಹರಿಚಿತ್ತ ಭುವಿಯತ್ತ ಮೆರೆಯುತ್ತ ಪಾವನೆಯಾಗಿ ಬಾ 
ಉರಿ ಬಿಸಿಲ ತುರಿಕೆಗೆ
ಸಿರಿಮದ್ದು ನೀನಾಗುತ್ತ ಬಾ
ಗರಿಗೆದರಿ ಬೆದರಿ ನಿಂತ
ಪಕ್ಷಿಗಳ ಪರಿಪಾಲಕನಾಗಿ ಬಾ 
ಹರಿದು ಬಾ ತಾಯೆ ಬಿರಿದು
ಭೋರ್ಗರೆಯುತ ಬಾ
ಸೇರಿ ಯಮುನೆ ಸರಸ್ವತಿ ತ್ರಿವೇಣಿ ಸಂಗಮವಾಗು ಬಾ 

No comments:
Post a Comment